Tuesday, 18 November 2014

ರಕ್ಷಕರ ಸಮ್ಮೇಳನ

                                     ರಕ್ಷಕರ ಸಮ್ಮೇಳನ 

   ಕೋಡಿಬೈಲ್ ನಾವೋದಯ ಎ.ಎಲ್.ಪಿ.ಶಾಲೆಯಲ್ಲಿ ಸರ್ವ ಶಿಕ್ಷಾ ಅಭಿಯಾನ ಕೇರಳ 2014-2015 ಹಕ್ಕು ಆಧಾರಿತ ಶಾಲೆ, ಕ್ಲೀನ್ ಸ್ಕೂಲ್,ಸ್ಮಾರ್ಟ್ ಸ್ಕೂಲ್ ,ಶಿಶು ಸೌಹಾರ್ದ ಶಾಲೆ ಎಂಬ ಯೋಜನೆಯಡಿಯಲ್ಲಿ ರಕ್ಷಕರ ಸಮ್ಮೇಳನವನ್ನು ದಿನಾಂಕ 14-11-2014 ರಂದು ಬೆಳಗ್ಗೆ 10-30 ಕ್ಕೆ ಪಿ.ಟಿ.ಎ ಅಧ್ಯಕ್ಷ ಶ್ರೀಯುತ ರಮೇಶ್ ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯ ಶ್ರೀಯುತ ಕೃಷ್ಣಾನಂದ ಮಯ್ಯ ಸ್ವಾಗತಿ ಇಂದಿನ ತರಗತಿಯ ಉದ್ದೇಶದ ಕುರಿತು ಪ್ರಾಸ್ತಾವಿಕ ಭಾಷಣ ಮಾಡಿದರು. ಎಂಪಿಟಿಎ ಅಧ್ಯಕ್ಷೆ ಶ್ರೀಮತಿ ಜಮೀಲ ಕಾರ್ಯಕ್ರಮದಲ್ಲಿ  ಉಪಸ್ಥಿತರಿದ್ದರು. 

     ಶಾಲಾ ಸಹ ಅಧ್ಯಾಪಕರಾದ ಯಸ್.ಯನ್.ಭಟ್  ರಕ್ಷಕರಿಗೆ ತರಗತಿ ನಡೆಸಿಕೊಟ್ಟರು.ಈ ಕಾರ್ಯಕ್ರಮದಲ್ಲಿ ಶೇಕಡಾ 60 ಮಕ್ಕಳ ಹೆತ್ತವರು ಭಾಗವಹಿಸಿದರು.ರಕ್ಷಕರಿಗೆ ಲಘು ಉಪಹಾರ ನೀಡಲಾಯಿತು.

 

 

No comments:

Post a Comment